Padua College of Commerce and Management Mangalore, in association with Padua College Alumni Association (PCAA) and JCI Mangalore -Lalbagh is organizing the annual *"Padua Job Fair – 2018” on Saturday 7th April 2018 at Padua College premises from 9.00am to 5.00pm.* purpose of this event is to connect the various companies or employers with potential employees, especially the outgoing students. We would also like to present our participants to the many employment opportunities available to them, both locally and nationally. Primarily our aim is to provide an opportunity for our present and past students along with the unemployed youth to get a job. *So far nearly 60 companies situated in and around Mangalore and some companies from Bangalore have registered.* Arrangements are made for the companies, for space, furniture, displays, signage, food, stay and other things. Companies those who come at the last moment may also be accommodated.

Candidates can apply on the spot. The eligibility for the registration is SSLC, PUC, ITI, Diploma, Management and Professional courses. The registration is free. The candidates should bring the copies of their resume, marks cards, experience certificates and other related documents, when they appear for the interview.

*Last year number of candidates who registered was 1242 out of whom 362 were shortlisted and 113 were employed.*

Candidates those who want to apply or the companies those who want to register can contact the college office by phone *+91-9743078519, +91-9844040056* for any queries.


ಪಾದುವ ಕಾಲೇಜ್ ಅಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್, ನಂತೂರು, ಮಂಗಳೂರು *ದಿನಾಂಕ 7ನೇ ಎಪ್ರಿಲ್, 2018, ಶನಿವಾರದಂದು, ಸಮಯ ಬೆಳಗ್ಗೆ 9 ರಿಂದ ಸಂಜೆ 5ರ ವರೆಗೆ,* ಕಾಲೇಜಿನ ಆವರಣದಲ್ಲಿ ಉದ್ಯೋಗಕಾಂಕ್ಷಿಗಳಿಗೋಸ್ಕರ ಆಯೋಜಿಸುತ್ತಿದೆ ವಾರ್ಷಿಕ ಉದ್ಯೋಗ ಮೇಳ *"PADUA JOB FAIR- 2018".*
ವಿವಿಧ ಕ್ಷೇತ್ರದ ಕಂಪೆನಿಗಳ ಮಾಲೀಕರು ಹಾಗೂ ಉದ್ಯೋಗ ಅರಸುವವರ ನಡುವೆ ಹಾಗೂ ಪ್ರಮುಖವಾಗಿ ಅಂತಿಮ ವರ್ಷದ ಪದವಿಯಲ್ಲಿ ಓದುತ್ತಿರುವ ವಿಧ್ಯಾರ್ಥಿಗಳ ಅಗತ್ಯಗನುಗುಣವಾಗಿ ಈ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಈ ಮೇಳದ ಮುಖಾಂತರ ನಾವು ಇದರಲ್ಲಿ ಪಾಲ್ಗೊಳ್ಳುವವರಿಗೆ ಲಭ್ಯವಿರುವ ಸ್ಥಳೀಯ ಹಾಗೂ ರಾಷ್ಟ್ರೀಯ ಉದ್ಯೋಗದ ಅವಕಾಶಗಳ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ. ಅದರಲ್ಲೂ ಪ್ರಾಥಮಿಕವಾಗಿ ನಾವು ನಮ್ಮ ಪ್ರಸ್ತುತ ಹಾಗೂ ಹಳೆ ವಿಧ್ಯಾರ್ಥಿಗಳಿಗೆ ಹಾಗೂ ನಿರುದ್ಯೋಗದ ಸಮಸ್ಯೆಯಿಂದ ಬಳಲುತ್ತಿರುವ ಯುವಜನರಿಗೆ ಉದ್ಯೋಗ ದೊರಕಿಸಿಕೊಡುವ ಉದ್ದೇಶದಲವನ್ನು ಹೊಂದಿದ್ದೇವೆ. *ಸದ್ಯದ ಮಟ್ಟಿಗೆ ಸುಮಾರು 60 ಸ್ಥಳೀಯ ಹಾಗೂ ಬೆಂಗಳೂರು ವ್ಯಾಪ್ತಿಯ ಕಂಪೆನಿಗಳು ಈಗಾಗಲೇ ನೋಂದಾಯಿಸಿಕೊಂಡಿವೆ.* ಎಲ್ಲಾ ಮೂಲಭೂತ ಸೌಕರ್ಯಗಳಾದ ಊಟ, ವಸತಿ, ಪೀಠೋಪಕರಣ, ಸ್ಥಳಾವಕಾಶ, ಇತ್ಯಾದಿ ನಮ್ಮ ಕಾಲೇಜಿನ ವತಿಯಿಂದ ಕಂಪೆನಿಗಳಿಗೆ ನೀಡಲಾಗುವುದು. ಅವತ್ತೇ ಬರುವ ಕಂಪೆನಿಗಳಿಗೂ ಇದರಲ್ಲಿ ಭಾಗವಹಿಸಲು ಅವಕಾಶವನ್ನೂ ಕಲ್ಪಿಸಲಾಗಿದೆ.

ಅಭ್ಯರ್ಥಿಗಳು ಉದ್ಯೋಗ ಮೇಳದ ದಿನದಂದು ಬಂದು ನೋಂದಾವಣಿ ಮಾಡಿಕೊಳ್ಳಬಹುದು. ಅಭ್ಯರ್ಥಿಯು ಎಸ.ಎಸ್.ಎಲ್.ಸಿ., ಪಿ.ಯು.ಸಿ., ಐ.ಟಿ.ಐ., ಡಿಪ್ಲೊಮಾ, ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ಹಾಗೂ ಯಾವುದೇ ವೃತ್ತಿಪರ ಕೋರ್ಸುಗಳನ್ನು ಗಿಟ್ಟಿಸಿದ ಅರ್ಹತೆಯನ್ನು ಪಡೆದಿರಬೇಕು. ಯಾವುದೇ ನೋಂದಾವಣಿ ಶುಲ್ಕವು ಇರುವುದಿಲ್ಲ. ಅಭ್ಯರ್ಥಿಗಳು ಬರುವಾಗ ಅಂಕಪಟ್ಟಿಗಳು, ಕೆಲಸದ ಅನುಭವದ ಪ್ರಮಾಣ ಪತ್ರಗಳು, ಹಾಗೂ ಇತರ ಪೂರಕವಾದ ದಾಖಲೆಗಳನ್ನು ತರಲು ವಿನಂತಿಸುತ್ತೇವೆ.

*ಕಳೆದ ವರ್ಷ ನಾವು ಆಯೋಜಿಸಿದ ಉದ್ಯೋಗ ಮೇಳದಲ್ಲಿ ಸುಮಾರು 1242 ಅಭ್ಯರ್ಥಿಗಳು ನೋಂದಾಯಿಸಿ, ಅದರಲ್ಲಿ ಸುಮಾರು 362 ಆಯ್ಕೆಯಾದರೆ, 113 ಅಭ್ಯರ್ಥಿಗಳು ಸ್ಥಳದಲ್ಲೇ ಉದ್ಯೋಗವನ್ನು ಪಡೆದಿದ್ದರು.*

ಹೆಚ್ಚಿನ ಮಾಹಿತಿಗಾಗಿ, ಅಥವಾ ನೋಂದಾವಣಿಗಾಗಿ ಅಭ್ಯರ್ಥಿಗಳು ಅಥವಾ ಕಂಪೆನಿಗಳು ಕಾಲೇಜಿನ ಕಛೇರಿಗೆ ಅಥವಾ ಈ ಕೆಳಗಿನ ಮೊಬೈಲ್ ಫೋನ್‌ಗಳಿಗೆ ಸಂಪರ್ಕಿಸಬಹುದು. *+91-9743078519, +91-9844040056*

ಪತ್ರಿಕಾ ಗೋಷ್ಠಿಯಲ್ಲಿ ಪಾದುವ ಕಾಲೇಜಿನ ಪ್ರಾಂಶುಪಾಲರಾದ ವಂ. ಆಲ್ವಿನ್ ಸೆರಾವೊ, ಉಪಪ್ರಾಂಶುಪಾಲರಾದ ಶ್ರೀ.ರೋಶನ್ ಸಂತುಮಯೋರ್, ಜೆ.ಸಿ.ಐ. ಮಂಗಳೂರು, ಲಾಲಭಾಗ್ ಇದರ ಅಧ್ಯಕ್ಷೆಯಾದ ಶ್ರೀಮತಿ ಸೌಜನ್ಯ ಹೆಗ್ಡೆರವರು, ಪಾದುವ ಹಳೆ ವಿಧ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರಿ. ಅಲೆಕ್ಸ್ ಸ್ಟುವರ್ಟ್‌, ಹಾಗೂ ಉದ್ಯೋಗ ಮೇಳದ ಸಮನ್ವಯ ಅಧಿಕಾರಿಯಾದ ಶ್ರೀ. ದೀನತ್ ಡೆಸಾರವರು ಉಪಸ್ಥಿತರಿದ್ದರು.

Click here for Job Fair 2018 - Job Description / Company Details

 

Comments powered by CComment

Home | News | Sitemap | Contact Us

Copyright © 2016 - www.paduadegreecollege.org . Powered by eCreators

Contact Us

PADUA COLLEGE OF COMMERCE AND MANAGEMENT
Nanthur, Mangaluru-575004

PH: FAX: 2217711

Email: [email protected]
           [email protected]