ಲೋಗೋಸ್ ಥಿಯೇಟರ್ ಟ್ರೂಪ್ ಸಾದರಪಡಿಸುವ ಲೋಗೋಸ್ ನಾಟಕೋತ್ಸವ ಇಂದಿನಿಂದ *ಪಾದುವ ಥಿಯೇಟರ್ ಹಬ್* ನಲ್ಲಿ ನಡೆಯಲಿದೆ.

*ಇಂದಿನ ನಾಟಕ*

*ರಾಧಾ....*

*ಹೆಣ್ಣು ಪ್ರಕೃತಿಯಂತೆ. ಅವಳ ಭಾವದೆಳೆಗಳು  ಸೂಕ್ಷ್ಮ ಹಾಗೂ ಸಂವೇದನಾಶೀಲ. ಅಸೂಕ್ಷ್ಮವಾಗಿ ವರ್ತಿಸಿ ಅವಳ ಭಾವದೆಳೆಗಳನ್ನು ತುಂಡರಿಸಿದಾಗಲೆಲ್ಲ ಅವಳು ಒಲವಿನ‌ ಎಳೆಗಳನ್ನು ಮತ್ತೆ ಮತ್ತೆ ನೇಯುತ್ತಾಳೆ. ಹಾಗೆ ಒಲವಿನೆಳೆಯಲ್ಲಿ ಶ್ಯಾಮನನ್ನು ನೇಯ್ದವಳು ರಾಧೆ. ಶ್ಯಾಮ ಕೃಷ್ಣನಾಗಿ ಸಾಗಿದಾಗ ಅವಳು ಹಿಂಬಾಲಿಸಲಿಲ್ಲ. ಅವನ ದಾರಿಗೆ ಒಲವಿನ ಬೇಲಿಯಾಗಲೂ ಇಲ್ಲ. ಅಗಲಿಕೆಯ ವಿಷಾದ, ಬದಲಿ ಸಂಗಾತಿಯ  ಆಯ್ಕೆ ಇವೆರಡನ್ನೂ ಬದಿಗಿಟ್ಟು ಬೇರೆಯದೇ ಆದ ಘನತೆಯ ಬದುಕನ್ನು ಕಟ್ಟಿಕೊಂಡವಳು ರಾಧೆ. ಶ್ಯಾಮನೊಲವನ್ನೇ ಬಲವಾಗಿಸಿ, ತಾನಿರುವಲ್ಲಿಯೇ ಬೃಂದಾವನವನ್ನು ಸೃಷ್ಟಿಸಿಕೊಂಡವಳು ರಾಧೆ.*
*ಹೆಣ್ಣಿನ ಅಸ್ಮಿತೆಯ ಚಹರೆಗಳು ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ  ರಾಧೆಯ ಆಯ್ಕೆಯ ಹೆಣ್ಣಿನ ಘನತೆಯ ಧ್ಯೋತಕವೂ ಆಗಬಲ್ಲದು. ಅವಲಂಬನವಿಲ್ಲದ ಒಂಟಿ ಬದುಕನ್ನು  ಘನವಾಗಿ ಸಂಭ್ರಮಿಸುವ  ಆಧುನಿಕ ರಾಧೆಯತ್ತ  ಕೃಷ್ಣನೂ ಶ್ಯಾಮನಾಗಿ ಬರಲೇಬೇಕಾಗುತ್ತದೆ.*
*ಹೆಣ್ಣಿನ ತಲ್ಲಣಗಳನ್ನು ಸೂಕ್ಷ್ಮ ಸಂವೇದನೆಯೊಂದಿಗೆ ನೋಡಬೇಕಾದ್ದು  ಇಂದಿನ ತುರ್ತು ಅವಶ್ಯಕತೆಯಾಗಿದೆ. ಇಲ್ಲದಿದ್ದರೆ  ಆಗ ಮಾತ್ರ ರಾಧೆಯ ಒಲವು ಕಾಲದೊಂದಿಗೆ ಝರಿಯಾಗಿ ಹರಿಯುತ್ತದೆ. ಇಲ್ಲದಿದ್ದರೆ ರಾಧೆಯರೂ ಬದುಕಿನಿಂದ, ಕೊನೆಗೆ ಶ್ಯಾಮನಿಂದಲೂ ವಿಮುಖವಾದಾರು.*


*ರಚನೆ: ಸುಧಾ ಆಡುಕಳ*
*ನಿರ್ದೇಶನ: ಡಾ. ಶ್ರೀಪಾದ ಭಟ್ ಶಿರಸಿ*
*ವಿನ್ಯಾಸ: ಮೋಹನ ಸೋನ,ರಾಜುಮಣಿಪಾಲ*
*ಸಂಗೀತ: ಬಿನು ಬಾಲಕೃಷ್ಣನ್*
*ಅಭಿನಯ: ಮಂಜುಳಾ ಸುಬ್ರಹ್ಮಣ್ಯ*
*ತಾಂತ್ರಿಕ ಸಹಾಯ: ಆಹಾರ್ಯಂ*

ಸ್ಥಳ: *ಪಾದುವಾ ಥಿಯೇಟರ್ ಹಬ್, ಪಾದುವಾ ಕಾಲೇಜ್.ನಂತೂರು, ಮಂಗಳೂರು*
ಸಮಯ: *ಸಂಜೆ- ಗಂಟೆ 6.30ಕ್ಕೆ*

*ಉಚಿತ ಪ್ರವೇಶ*


*ನಾಳೆಯ ನಾಟಕ: ಝಜ್.... (ಕೊಂಕಣಿ)*

Comments powered by CComment

Home | News | Sitemap | Contact Us

Copyright © 2016 - www.paduadegreecollege.org . Powered by eCreators

  • 2.png8.png9.png0.png7.png
  • Visitors

Contact Us

PADUA COLLEGE OF COMMERCE AND MANAGEMENT
Nanthur, Mangaluru-575004

PH: FAX: 2217711

Email: [email protected]
           [email protected]