ಸಾಮರ್ಥ್ಯ ಆಧಾರಿತ ವೃತ್ತಿಯನ್ನು ಗಳಿಸಲು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಿ: DK SP ರಹೃಷಿಕೇಶ್ ಭಗವಾನ್ IPS
ಮಂಗಳೂರು, ಪಾದುವಾ ಕಾಲೇಜ್ ಆಫ್ ಕಾಮರ್ಸ್ ಆಂಡ್ ಮ್ಯಾನೇಜ್ಮೆಂಟ್: ನಂತೂರು.

ವಿದ್ಯಾರ್ಥಿಗಳು ಬದುಕಿನ ನೈಜತೆಯನ್ನು ಅರಿತುಕೊಂಡು, ಲಭ್ಯವಿರುವ ಅವಕಾಶವನ್ನು ಗಳಿಸುವಲ್ಲಿ ಮನಸ್ಸನ್ನು ಕೇಂದ್ರೀಕೃತಗೊಳಿಸಬೇಕು. UPSC, KPSC ಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈಗಿಂದಲೇ ತಯಾರಿಯನ್ನು ನಡೆಸಿ ಭವಿಷ್ಯದ ಕಡೆ ಗಮನ ಹರಿಸಿ ಎಂದು ಪಾದುವಾ ಕಾಲೇಜು, ಎಕ್ಸ್ಪೋ ಫ್ರೆಂಡ್ಸ್ ಕ್ಲಬ್ ಮತ್ತು ನೆಹರೂ ಯುವ ಕೇಂದ್ರ ಇವರ ಜಂಟಿ ನೇತೃತ್ವದಲ್ಲಿ ನಡೆದ ವೃತ್ತಿ ಮಾರ್ಗದರ್ಶನ ಸಮಾರಂಭದಲ್ಲಿ ಮಾತನಾಡುತ್ತಾ ದ.ಕ. SP ಹೃಷಿಕೇಶ್ ಭಗವಾನ್ IPS ಇವರು ಅಭಿಪ್ರಾಯಪಟ್ಟರು.

 

 

 

 

 

 

 

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ V4 ಮೀಡಿಯಾ ನಿರ್ದೇಶಕರಾದ ವಿಶ್ವಾಸ್ ಕುಮಾರ್ ದಾಸ್ ಇವರು ವಿದ್ಯಾರ್ಥಿಗಳಿಗೆ ಉದ್ಯಮಶೀಲತೆ ಅವಕಾಶಗಳ ಬಗ್ಗೆ ಮಾಹಿತಿಯಿತ್ತರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಬಂಟ್ವಾಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಪ್ರೊ. ನಂದಕಿಶೋರ್ ಇವರು ವಿದ್ಯಾರ್ಥಿಗಳಿಗೆ ಸಂದರ್ಶನ ಕೌಶಲ್ಯಗಳ ಬಗ್ಗೆ ತರಬೇತಿ ನೀಡಿದರು. ಭಾರತೀಯ ನೌಕಾದಳದ ಶ್ರೀ ವಿಜಯನ್ ಇವರು ಭಾರತೀಯ ಸೇನೆಗಳಲ್ಲಿರುವ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡಿದರು. ಪ್ರಾಂಶುಪಾಲರಾದ ಪ್ರೊ. ರಾಜನ್ ವಿ. ಎನ್. ಇವರು ಕಾರ್ಯಕ್ರಮಕ್ಕೆ ಶುಭಕೋರಿ, ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆಯಿತ್ತರು. ನೆಹರೂ ಯುವ ಕೇಂದ್ರದ ಯುವ ಅಧಿಕಾರಿ ಶ್ರೀ ರಘವೀರ್ ರವರು ಸ್ವಾಗತಿಸಿ, ಪಾದುವಾ ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀ ರೋಶನ್ ಸಂತುಮಯೋರ್ ರವರು ಧನ್ಯವಾದ ಸಮರ್ಪಿಸಿದರು. ಶ್ರೀ ಅಯಾಜ್ ಬಾಷಾ, ಎಕ್ಸ್ಪೋ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷರು ಮತ್ತು ಜಗದೀಶ್ ಕೆ. NYK ಅಧಿಕಾರಿ ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Comments powered by CComment

Home | News | Sitemap | Contact Us

Copyright © 2016 - www.paduadegreecollege.org . Powered by eCreators

Contact Us

PADUA COLLEGE OF COMMERCE AND MANAGEMENT
Nanthur, Mangaluru-575004

PH: FAX: 2217711

Email: [email protected]
           [email protected]